manasina maatu
Unhindered flow of feelings and thoughts:)
Monday, 20 January 2014
taalme
ತಾಳ್ಮೆ
ಓ ವಿಧಿಯೇ ,
ನಿನ್ನ ಲೀಲೆ ಬಲ್ಲವರಾರೆ?
ಏಳುವರಷ್ಟರಲ್ಲಿ ಬೀಳಿಸುವೆ,
ಬೀಳುವಷ್ಟರಲ್ಲಿ ಏಳಿಸುವೆ..
ನಾ
ನೋಯುವೆ,
ಬೇಯುವೆ,
ನನ್ನ ದಿನಗಳಿಗಾಗಿ
ನಾ ಕಾಯುವೆ.........
Thursday, 2 January 2014
aase bhaashe
ಆಸೆ ಭಾಷೆ
ನನಗೆ ಕೊಬ್ಬರಿ ಮಿಟಾಯಿ ಆಸೆ
"ಬರುವ ಭಾನುವಾರ ಮಾಡುವ"
ಎಂಬುದು ಅಮ್ಮ ಕೊಟ್ಟ ಭಾಷೆ
ಮನದ ಮಂಡಿಗೆಯ ಜಗಿಯುತ್ತಲೇ
ಬಂತು, ಆ ಭಾನುವಾರ!
"ಈಗಲೇ ಏಕೆ ಅವಸರ?
ಬರಲಿ ಮುಂದಿನ ಭಾನುವಾರ" - ಅಮ್ಮನ ಉತ್ತರ
ಉರುಳಿದವು ದಿನಗಳು
ಕಳೆದವು ವಾರಗಳು
ತುಂಬಿತು ತಿಂಗಳು.
ಒಂದು ದಿನ ಸಿಡಿಯಿತು,
ನನ್ನ ಆಸೆಯ ಆಟಂಬಾಂಬು!
"ಕೊಬ್ಬರಿ ಮಿಟಾಯಿಗೆ
ಕಾಯಬೇಕೇ ತಿಂಗಳು, ತಿಂಗಳು?"
ಪ್ರತಿಯಾಗಿ ಸಿಡಿಯಿತು ಹೈಡ್ರೋಜನ್ ಬಾಂಬು!
"ಯಾವಾಗಲೂ ಇದು ಇದ್ದದ್ದೇ
ಹಠಮಾರಿತನದ ಮಕ್ಕಳು"
ಅಬ್ಬಬ್ಬಾ! ಕೆಟ್ಟರೆ ಗ್ರಹಚಾರ,
ಮಿಟಾಯಿಗೂ ಹಾಹಾಕಾರ.
ತ್ಯಜಿಸಬೇಕೆನ್ದಿರುವೆ ಸಿಹಿ
ಇದರಿಂದಲ್ಲವೇ ಮನೆಯೆಲ್ಲ ಕಹಿ?
ಎಂದು ತಲೆಯೆತ್ತಿ ನಿಂತಾಗ
ಕ್ಯಾಲೆಂಡರಿನ ಬುದ್ಧ,
ನಗುತ್ತಿದ್ದನಾಗ.
Home
Subscribe to:
Posts (Atom)